ತೂಲಿಯಮ್ 		
ರಾಸಾಯನಿಕ ಧಾತು. ಪ್ರತೀಕ Tm, ಪರಮಾಣು ಸಂಖ್ಯೆ 69, ಪರಮಾಣು ತೂಕ 168.934. ವಿರಳ ಭಸ್ಮ ಧಾತುಗಳ ಅಥವಾ ಲ್ಯಾಥನೈಡ್ ಗುಂಪಿಗೆ ಸೇರಿರುವ ವಿರಳಲೋಹ ಧಾತುವಿದು. ಎಲೆಕ್ಟ್ರಾನಿಕ್ ವಿನ್ಯಾಸ  1s2 2s2 2p6 3s2 3p6 3d10 4s2 4p6 4d10 4f13 5s2 5p6 6s2 ಇದರ ಸ್ಥಿರ ಸಮಸ್ಥಾನಿಯಾದ 169ಖಿm ನಿಸರ್ಗದಲ್ಲಿ ದೊರೆಯುತ್ತದೆ. ಈ ಧಾತುವನ್ನು ಸತತವಾಗಿ ನ್ಯೂಟ್ರಾನ್ ತಾಡನೆಗೆ ಒಳಪಡಿಸಿದಾಗ ವಿಕಿರಣ ಪಟುತ್ವವಿರುವ 170ಖಿm ಸಮಸ್ಥಾನಿ ಉಂಟಾಗುವುದು. ಇದರ ಅರ್ಧಾಯು 125 ದಿವಸ; ಈ ಸಮಸ್ಥಾನಿ ಎಕ್ಸ್‍ಕಿರಣಗಳನ್ನು ಹೋಲುವಂಥ ಸೌಮ್ಯ (-ಕಿರಣವನ್ನು ಹೊರಸೂಸುವುದು. ತೂಲಿಯಮ್ಮನ್ನು ಕ್ಲೀವ್ ಎಂಬ ವಿe್ಞÁನಿ ಆವಿಷ್ಕರಿಸಿದ. (1879). ಇದು ನಿಸರ್ಗದಲ್ಲಿ ದೊರಕುವ ಪ್ರಮಾಣ ಲ್ಯಾಂಥನೈಡ್ ಗುಂಪಿನ ಇತರ ಧಾತುಗಳದ್ದಕ್ಕಿಂತ ಕಡಿಮೆಯಾಗಿದ್ದರೂ ಬಿಸ್ಮತ್ ಧಾತುವಿನ 
ಸರಿಸಮವಾಗಿದೆ. ಮಾನಜೈಟ್, ಗ್ಯಾಡೊಲಿನೈಟ್, ಯೂಕ್ಸನೈಟ್ ಮುಂತಾದ ಖನಿಜಗಳಲ್ಲಿ ಈ ಧಾತು ಕಡಿಮೆ ಪ್ರಮಾಣದಲ್ಲಿ ದೊರಕುವುದು. ತೂಲಿಯಮ್ಮಿನ ನಿರ್ಜಲ ಫ್ಲೋರೈಡನ್ನು (ಖಿm ಈ3) ಕ್ಯಾಲ್ಸಿಯಮ್ಮಿನೊಡನೆ ಹೆಚ್ಚಿನ ಉಷ್ಣತೆಯಲ್ಲಿ ಅಪಕರ್ಷಿಸುವ ಮೂಲಕ ತೂಲಿಯಮ್ಮನ್ನು ತಯಾರಿಸಬಹುದು. ಅಲ್ಲದೇ ಖಿm+3 ಆಯಾನನ್ನು ಇತರ ಲ್ಯಾಂಥನೈಡ್ ಅಯಾನುಗಳಿಂದ ಆಯಾನ್ ವಿನಿಮಯ ವಿಧಾನಗಳಿಂದಲೂ ಬೇರ್ಪಡಿಸಿ ಶುದ್ಧಿಮಾಡಬಹುದು. ಈ ಲೋಹ ಬೆಳ್ಳಿಯಂತೆ ಬೆಳ್ಳಗಿರುವ ಮತ್ತು ಹೆಚ್ಚು ರಾಸಾಯನಿಕ ಕ್ರಿಯಾಶೀಲತೆ ಇರುವ ವಸ್ತು. ಇದರ ದ್ರವನಬಿಂದು 15450 ಅ ; ಸಾಂದ್ರತೆ 9.332. ಇದಕ್ಕೆ-2630 ಅ ಗಿಂತ ಕಡಿಮೆ ಉಷ್ಣತೆಯಲ್ಲಿ ಫೆರ್ರೋಕಾಂತೀಯ ಗುಣ ಉಂಟು. ಕಾಸಿದಾಗ ವಾಯುವಿನೊಡನೆ ವರ್ತಿಸಿ ಖಿm2ಔ3 ಆಕ್ಸೈಡ್ ಉತ್ಪತ್ತಿಯಾಗುವುದು. ನೀರಿನೊಡನೆ ನಿಧಾನವಾಗಿಯೂ ಆಮ್ಲಗಳೊಡನೆ ರಭಸವಾಗಿಯೂ ಈ ಲೋಹ ವರ್ತಿಸಿ ಹೈಡ್ರೋಜನ್ನನು ಬಿಡುಗಡೆ ಮಾಡುತ್ತದೆ. ಈ ಲೋಹವನ್ನು ಹ್ಯಾಲೊಜನ್ನುಗಳು, ಇಂಗಾಲ, ಸಿಲಿಕಾನ್ ಮತ್ತು ಗಂಧಕಗಳೊಡನೆ ಕಾಸಿದಾಗ ರಾಸಾಯನಿಕ ಕ್ರಿಯೆ ನಡೆದು ಅನುಗುಣವಾದ ದ್ವಿಸಂಯುಕ್ತಗಳು ಉಂಟಾಗುತ್ತವೆ. ಘನರೂಪದ ಸಂಯುಕ್ತಗಳಲ್ಲೂ ದ್ರಾವಣಗಳಲ್ಲೂ ಇದರ ಉತ್ಕರ್ಷಣ ಸ್ಥಿತಿ +3 ಆಗಿರುವುದು. ಆದರೂ +2 ಉತ್ಕರ್ಷಣ ಸ್ಥಿತಿಯಲ್ಲಿ ತಯಾರಿಸಿರುವ ಸಂಯುಕ್ತ ಖಿmI2 ಒಂದೇ. ಖಿm+3 ಲವಣಗಳು ತಿಳಿಹಸಿರುಬಣ್ಣದವು. ಖಿm+3 ಅಯಾನಿನಲ್ಲಿ ಜೊತೆಯಾಗಿರದ ಒಂಟಿ ಎಲೆಕ್ಟ್ರಾನ್ ಇರುವುದರಿಂದ ಅದಕ್ಕೆ ಅನುಕಾಂತತಾ ಗುಣ ಉಂಟು. ಈ ಲೋಹವನ್ನು ಸ್ವಯಂದಾಹಕ (ಪೈರೊಫಾರಿಕ್) ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸುವರು. ಕಬ್ಬಿಣೇತರ ಮಿಶ್ರಲೋಹಗಳ ಗುಣಗಳನ್ನು ಮಾರ್ಪಡಿಸಲು ಕೂಡ ಇದರ ಬಳಕೆ ಉಂಟು. 170ಖಿm ವಿಕಿರಣ ಸಮಸ್ಥಾನಿಯನ್ನು ಸುಲಭವಾಗಿ ಸಾಗಿಸಬಹುದಾದ ಎಕ್ಸ್‍ಕಿರಣ ಯಂತ್ರದಲ್ಲಿ ಬಳಸುವರು. 
(ಎಂ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ